
ಮೀಮ್
ಮೀಮ್ ಪ್ರವಾದಿ ಪ್ರೇಮ ಕಾವ್ಯಗಳ ನವ್ಯ ಸೌಂದರ್ಯದ ಸಂಕೇತವಾಗಿದೆ. ಏಳು ಆವೃತ್ತಿಗಳಲ್ಲಿ ಮಲಯಾಳಂ ಮತ್ತು ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾದಿ ಕವಿತೆಗಳಿಗೆ ಜನ್ಮ ನೀಡಿದ ಮೀಮ್, ಇಂದಿಗೂ ಸಮಕಾಲೀನ ಪ್ರವಾದಿ ಕಾವ್ಯದ ಗಮನಾರ್ಹ ಸಾಹಿತ್ಯ ಸಂಗ್ರಹವಾಗಿ ಮುಂದುವರಿದಿದೆ. ಎಂಟನೇ ಆವೃತ್ತಿಯು ಆ ಮುಂದುವರಿಕೆಯ ಹೊಸ ಅಧ್ಯಾಯವಾಗಿದೆ. ಪ್ರತಿ ಆವೃತ್ತಿಯು ಕೇವಲ ಹೊಸ ಕವಿತೆಗಳ ಆಚರಣೆಯಷ್ಟೇ ಅಲ್ಲ, ಪ್ರವಾದಿ ಪ್ರೇಮದ ನಿರಂತರ ಕಾವ್ಯದ ಹುಡುಕಾಟವೂ ಆಗಿದೆ.
ಮೀಂ ಅತಿಥಿಗಳು

ಡಾ. ಅಬ್ದುಲ್ ಹಕೀಮ್ ಅಝ್ಹರಿ

ಡಾ. ಮುಸ್ತಫಾ ಕೆ.ಹೆಚ್.

ಎಸ್. ಪಿ. ಹಂಝ ಸಖಾಫಿ

ಸಜೀರ್ ಬುಖಾರಿ

ಬಶೀರ್ ಕಿನ್ಯ

ಝೈನ್ ಮುಈನಿ ಇನೋಳಿ

ಪುನೀತ್ ಅಪ್ಪು

ಡಾ. ಅಬ್ದುಲ್ ಹಕೀಮ್ ಅಝ್ಹರಿ

ಡಾ. ಮುಸ್ತಫಾ ಕೆ.ಹೆಚ್.

ಪುನೀತ್ ಅಪ್ಪು
ಮೀಂ ಫೆಸ್ಟಿವಲ್ ಮಂಗಳೂರು
ಪೈಗಂಬರರ ಶ್ರೇಷ್ಟ ಮತ್ತು ಬಹು ಶಿಸ್ತೀಯ ದರ್ಶನಗಳನ್ನು ಆಧುನಿಕ ನಿದರ್ಶನಗಳೊಂದಿಗೆ ಮರುಕಲ್ಪಿಸುತ್ತಾ, ಸಾಹಿತ್ಯ, ತತ್ವಶಾಸ್ತ್ರ, ಕಲೆ, ಇತಿಹಾಸ, ಆಧ್ಯಾತ್ಮಿಕತೆ ಮತ್ತು ಬಹುಭಾಷಾ ಸಂವಾದಗಳ ಮೂಲಕ ಉದಾತ್ತ ಮೌಲ್ಯಗಳನ್ನು ಅನ್ವೇಷಿಸುವ ಒಂದು ಪ್ರಯತ್ನವೇ ಮೀಮ್ ಫೆಸ್ಟಿವಲ್ -The festival of Prophetic Imagination-ಈ ಬಾರಿಯ 'ಪೈಗಂಬರ್ ದರ್ಶನಗಳ ಮಂಥನ' ಕ್ಕೆ ಸೆಪ್ಟೆಂಬರ್ 27 ರಂದು ಮಂಗಳೂರಿನ IMA ಆಡಿಟೋರಿಯಂ ವೇದಿಕೆಯಾಗುತ್ತಿದೆ.